ಕಾಜಲ್ ಅಗರ್ವಾಲ್ (೧೯ ಜೂನ್ ೧೯೮೫) ಭಾರತೀಯ ಚಲನಚಿತ್ರ ನಟಿ ಮತ್ತು ರೂಪದರ್ಶಿ. ಅವರು ತಮಿಳು ಮತ್ತು ತೆಲುಗು ಚಲನಚಿತ್ರೋದ್ಯಮಗಳಲ್ಲಿ ತಮ್ಮ ವೃತ್ತಿಜೀವನವನ್ನು ಸ್ಥಾಪಿಸಿದ್ದಾರೆ . ಹಾಗೂ ನಾಲ್ಕು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ .ಕಾಜಲ್ ರವರು ಕ್ಯೂ!ಹೋ ಗಯಾ ನಾ... ಎಂಬ ಹಿಂದಿ ಚಿತ್ರದ ಮೂಲಕ ತಮ್ಮ ವೃತ್ತಿಜೀವನಕ್ಕೆ ಪಾದಾರ್ಪಿಸಿದರು . ಹಾಗೂ ೨೦೦೭ ರಲ್ಲಿ ಅವರು ಮೊದಲ ಬಾರಿಗೆ ಲಕ್ಷ್ಮೀ ಕಲ್ಯಾಣಂ ಎಂಬ ಚಿತ್ರದಲ್ಲಿ ನಟಿಸಿದರು .ಅದೇ ವರ್ಷದಲ್ಲಿ, ಅವರು ಚಂದಾಮಾಮಾ ಎಂಬ ಚಿತ್ರದಲ್ಲಿ ನಟಿಸಿದರು .ಈ ಚಿತ್ರವು ಅವರಿಗೆ ಅತಿ ಹೆಚ್ಚು ಯಶಸ್ಸನ್ನು ಕೊಟ್ಟಿತು . ೨೦೦೯ ರ ಐತಿಹಾಸಿಕ ಕಾದಂಬರಿ ತೆಲುಗು ಚಲನಚಿತ್ರ ಮಗಧೀರ ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವನ್ನು ನೀಡಿತು ಹಾಗೂ ಅವರು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದರು . ಇದು ಸಾರ್ವಕಾಲಿಕವಾಗಿ ಅತಿ ಹೆಚ್ಚು ಯಶಸ್ಸನ್ನು ಗಳಿಸಿದ ತೆಲುಗು ಚಿತ್ರಗಳ ಪಟ್ಟಿಯಲ್ಲಿ ಒಂದಾಗಿದೆ. ಇದರಿಂದಾಗಿ ಫಿಲ್ಮ್‌ಫೇರ್ ಸೇರಿದಂತೆ ಹಲವಾರು ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಅವರು ಅತ್ಯುತ್ತಮ ನಟಿ ಎಂಬ ನಾಮನಿರ್ದೇಶನಗಳನ್ನು ಪಡೆದರು .ಕಾಜಲ್ ರವರು ಡಾರ್ಲಿಂಗ್ (೨೦೧೦), ಬೃಂದಾವನಂ (೨೦೧೦) , ಮಿಸ್ಟರ್ ಪರ್ಫೆಕ್ಟ್ (೨೦೧೧) , ಬಿಸಿನೆಸ್ ಮ್ಯಾನ್ (೨೦೧೨) , ನಾಯಕ್ (೨೦೧೩) , ಬಾದ್ಶಾ (೨೦೧೩), ಗೋವಿಂದು ಅಂಡರಿವಾಡೆಲೆ (೨೦೧೪), ಟೆಂಪರ್ (೨೦೧೫) ಮತ್ತು ಖೈದಿ ಸಂಖ್ಯೆ 150 (೨೦೧೭) ಎಂಬ ತೆಲುಗು ಚಿತ್ರಗಳಲ್ಲಿ , ತಮಿಳಿನ ಉನ್ನತ ಯೋಜನೆಗಳಾದ ನಾನ್ ಮಹಾನ್ ಅಲ್ಲಾ (೨೦೧೦), ಮಾತ್ರ್ರಾನ್ (೨೦೧೨), ತುಪ್ಪಕ್ಕಿ (೨೦೧೨), ಜಿಲ್ಲಾ (೨೦೧೪), ವಿವೇಗಂ (೨೦೧೭) ಮತ್ತು ಮರ್ಸಲ್ (೨೦೧೭) ಚಿತ್ರಗಳಲ್ಲಿ ಕಾಜಲ್ ರವರು ನಾಯಕಿಯಾಗಿ ನಟಿಸಿದ್ದಾರೆ. ಸಿಂಗಮ್ (೨೦೧೧) ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಪುನಾರಾಗಮನ ಮಾಡಿದರು .ಹಾಗೂ ಮತ್ತೊಂದು ಚಿತ್ರ ಸ್ಪೆಷಲ್ 26 (೨೦೧೩)ನಲ್ಲಿಯೂ ಕಾಜಲ್ ನಟಿಸಿದ್ದಾರೆ . == ಜನನ ಮತ್ತು ಆರಂಭಿಕ ಜೀವನ == ಕಾಜಲ್ ಅಗರ್ವಾಲ್ ರವರು ೧೯ ಜೂನ್ ೧೯೮೫ ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು . ಆಕೆಯ ತಂದೆ ವಿನಯ್ ಅಗರ್‌ವಾಲ್, ಜವಳಿ ವ್ಯವಹಾರದಲ್ಲಿ ಉದ್ಯಮಿ ಮತ್ತು ಅವರ ತಾಯಿ ಸುಮನ್ ಅಗರ್‌ವಾಲ್ ರವರು ಕನ್ಫೆಕ್ಷನರ್ . ತಮಿಳು ಮತ್ತು ಮಲಯಾಳಂ ಸಿನಿಮಾದಲ್ಲಿ ಹೆಸರುವಾಸಿಯಾಗಿರುವ ನಟಿ ನಿಶಾ ಅಗರ್ವಾಲ್ ಇವರ ಸಹೋದರಿ . ಅವರು ಕರಣ್ ವಲೆಚಾ (ವ್ಯವಸ್ಥಾಪಕ ನಿರ್ದೇಶಕ ಗೋಲ್ಡ್ಸ್ ಜಿಮ್ಸ್, ಏಷ್ಯಾ) ಅವರನ್ನು ವಿವಾಹವಾದರು. ಅವರು ಸೇಂಟ್ ಆನ್ಸ್ ಪ್ರೌಢ ಶಾಲೆಯಲ್ಲಿ ಅಧ್ಯಯನ ಮಾಡಿದರು ಮತ್ತು ಜೈ ಹಿಂದ್ ಕಾಲೇಜಿನಲ್ಲಿ ವಿಶ್ವವಿದ್ಯಾನಿಲಯ ಪೂರ್ವ ಶಿಕ್ಷಣವನ್ನು ಪೂರೈಸಿದರು. ಕಿಶಿನ್‌ಚಂದ್ ಚೆಲ್ಲಾರಂ ಕಾಲೇಜಿನಿಂದ ಮಾರ್ಕೆಟಿಂಗ್ ಮತ್ತು ಜಾಹೀರಾತಿನಲ್ಲಿ ಪರಿಣತಿಯೊಂದಿಗೆ ಸಮೂಹ ಮಾಧ್ಯಮದಲ್ಲಿ ಪದವಿ ಪಡೆದರು. ತನ್ನ ಬೆಳೆಯುತ್ತಿರುವ ವರ್ಷಗಳಲ್ಲಿ ಎಂಬಿಎ ಕನಸುಗಳನ್ನು ಆಶ್ರಯಿಸಿರುವ ಅವರು ಶೀಘ್ರದಲ್ಲೇ ಸ್ನಾತಕೋತ್ತರ ಪದವಿಯನ್ನು ಸಾಧಿಸಲು ಉದ್ದೇಶಿಸಿದ್ದಾರೆ. == ವೃತ್ತಿಜೀವನ == === ಫಿಲ್ಮೋಗ್ರಾಫಿ === === ಗಾಯಕಿಯಾಗಿ === === ಬ್ರಾಂಡ್ ಅನುಮೋದನೆಗಳು === ಅಗರ್ವಾಲ್ ರವರು ಹೆಚ್ಚಿನ ಸಂಖ್ಯೆಯ ಬ್ರಾಂಡ್‌ಗಳನ್ನು ಅನುಮೋದಿಸುತ್ತಾರೆ . ತನ್ನ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, ಅವರು ಜಾಹೀರಾತುಗಳಲ್ಲಿ ನಟಿಸುತ್ತಿದ್ದರು . ಅವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ಬ್ರಾಂಡ್ ಅಂಬಾಸಿಡರ್ ಆಗಿ ಪ್ರತಿನಿಧಿಸುತ್ತಿದ್ದಾರೆ .ಹಾಗೂ ಇವರು ಲಕ್ಸ್ ಸಾಬೂನಿನ ಬ್ರಾಂಡ್ ಅಂಬಾಸಿಡರ್ . ಅವರು ದಕ್ಷಿಣ ಭಾರತದ ಹಲವಾರು ಆಭರಣ ಮಳಿಗೆಗಳನ್ನು ಅನುಮೋದಿಸಿದ್ದಾರೆ - ಹೈದರಾಬಾದ್‌ನ ಆರ್ಎಸ್ ಬ್ರದರ್ಸ್, ಪುದುಚೇರಿ ಯಲ್ಲಿ ಶ್ರೀ ಲಕ್ಷ್ಮಿ ಜ್ಯುವೆಲ್ಲರಿ ಮತ್ತು ಸೇಲಂನಲ್ಲಿ ಎವಿಆರ್. == ಗ್ಯಾಲರಿ == == ಉಲ್ಲೇಖಗಳು ==